ಕರುಳಿನ ಕರೆ - Karulina Kare

11/18/2008 08:24:00 PM / Posted by Namma Kannada Nadu /


ಚಿತ್ರ: ಕರುಳಿನ ಕರೆ (೧೯೭೦)
ಕಥೆ/ಕಾದಂಬರಿ: ಪುಟ್ಟಣ್ಣ ಕಣಗಾಲ್
ಸಂಗೀತ: ಎಂ. ರಂಗರಾವ್
ಗಾಯನ: ಬಿ.ಕೆ.ಸುಮಿತ್ರ ಮತ್ತು ಸಂಗಡಿಗರು
ನಾಯಕ: ರಾಜಕುಮಾರ್
ನಾಯಕಿ: ಕಲ್ಪನಾ
ಸಂಕಲನ: ಎಸ್.ಪಿ.ಎನ್.ಕೃಷ್ಣ, ಟಿ.ಪಿ.ವೇಲಾಯುಧಂ
ನಿರ್ದೇಶನ: ಪುಟ್ಟಣ್ಣ ಕಣಗಾಲ್
ನಿರ್ಮಾಪಕರು: ಶ್ರೀಕಾಂತ್ ನಹತಾ

ಅ ಆ..ಅ ಆ.. ಇ ಈ..ಇ ಈ..
ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅ ಅ ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ ||ಅ ಆ||
ಆ ಆ (ಆಟ ಊಟ ಓಟ ಕನ್ನಡ ಒಂದನೆ ಪಾಠ)೨
ಕನ್ನಡ ಭಾಷೆಯ ಕಲಿತವಗೆ ಜೀವನವೇ ರಸದೂಟ ||ಅ ಆ||
ಇ ಇ (ಇದ್ದವರೆಲ್ಲ ಇಲ್ಲದವರಿಗೆ ನೀಡಲೇ ಬೇಕು)
ಈ ಈ (ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು) ೨ ||ಅ ಆ||
ಉ ಉ (ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ)
ಊ ಊ (ಊರಿಗೆ ದ್ರೋಹ ಮಾಡಿ ಬದುಕಲೆನಿಸಬೇಡ) ೨ ||ಅ ಆ||
ಋ ೠ ಎ ಏ ಐ.. ಭಾರತ ಮಾತೆಗೆ ಜೈ !
ಒ ಒ (ಒಂದೇ ತಾಯಿ ಮಕ್ಕಳು ನಾವು ಒಂದುಗೂಡಬೇಕು)
ಓ ಓ (ಓದನು ಕಲಿತು ದೇಶದ ಸೇವೆಗೆ ನಿಲ್ಲಬೇಕು) ೨ ||ಅ ಆ||
ಔ ಅಂ ಅಃ..ಔ ಅಂ ಅಃ..
ಅಃ.. ಆಹಾ.. ಆಹ ಹ ಹ ಹ

Print this post

0 comments:

Post a Comment