ಕರ್ನಾಟಕ ಭಾರತದ ನಾಲ್ಕು ಪ್ರಮುಖ ದಾಕ್ಷಿಣಾತ್ಯ ರಾಜ್ಯಗಳಲ್ಲಿ ಒಂದು. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು "ಮೈಸೂರು ರಾಜ್ಯ" ಎಂದಿದ್ದಿತು. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು.
"ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.
ಕರ್ನಾಟಕದ ಪಶ್ಚಿಮಕ್ಕೆ ಅರಬ್ಬೀ ಸಮುದ್ರ, ವಾಯವ್ಯಕ್ಕೆ ಗೋವ ರಾಜ್ಯ, ಉತ್ತರಕ್ಕೆ ಮಹಾರಾಷ್ಟ್ರ, ಪೂರ್ವಕ್ಕೆ ಆಂಧ್ರ ಪ್ರದೇಶ ಆಗ್ನೇಯಕ್ಕೆ ತಮಿಳುನಾಡು ಮತ್ತು ನೈರುತ್ಯಕ್ಕೆ ಕೇರಳ ರಾಜ್ಯಗಳಿವೆ.
ರಾಜ್ಯದಲ್ಲಿ ಮೂರು ಮುಖ್ಯ ಭೌಗೋಳಿಕ ಪ್ರದೇಶಗಳಿವೆ:
ಕರಾವಳಿ ಪ್ರದೇಶ - ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ತಗ್ಗಿನ ಪ್ರದೇಶ, ಸಾಕಷ್ಟು ಮಳೆ ಪಡೆಯುತ್ತದೆ.
ಪಶ್ಚಿಮ ಘಟ್ಟಗಳು - ಅರಬ್ಬೀ ಸಮುದ್ರದ ತೀರದೊಂದಿಗೆ ಸಾಗುವ ಪರ್ವತ ಸರಣಿ, ಸರಾಸರಿ ಸಮುದ್ರ ಮಟ್ಟದಿಂದ ೯೦೦ ಮೀ ಎತ್ತರದಲ್ಲಿದೆ. ಇಲ್ಲೂ ಸಹ ಸಾಕಷ್ಟು ಮಳೆ ಆಗುತ್ತದೆ.
ಬಯಲು ಸೀಮೆ - ದಖನ್ ಪ್ರಸ್ಥಭೂಮಿ, ರಾಜ್ಯದ ಒಳನಾಡು, ಮಳೆ ಕಡಿಮೆ ಇರುವ ಪ್ರದೇಶ
೨೦೦೧ ರ ಜನಗಣತಿಯಂತೆ, ೫ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಹತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕರ್ನಾಟಕ ರಾಜ್ಯದಲ್ಲಿ ರಾಜಧಾನಿಯಾದ ಬೆಂಗಳೂರು ಮಾತ್ರ ೧೦ ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ನಗರ. ಇತರ ಪ್ರಮುಖ ನಗರಗಳೆಂದರೆ ಮೈಸೂರು,ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ಬಳ್ಳಾರಿ, ಮತ್ತು ಬೆಳಗಾವಿ.
ಭಾರತದ ಚಿನ್ನದ ಉತ್ಪಾದನೆಯ ಶೇ. ೯೦ ಕ್ಕೂ ಹೆಚ್ಚು ಕರ್ನಾಟಕದಲ್ಲಿ ನಡೆಯುತ್ತದೆ.
Karnataka is a state in the southern part of India. It was created on November 1, 1956, with the passing of the States Reorganization Act. Originally known as the State of Mysore, it was renamed Karnataka in 1973. Karnataka is bordered by the Arabian Sea to the west, Goa to the northwest, Maharashtra to the north, Andhra Pradesh to the east, Tamil Nadu to the southeast, and Kerala to the southwest. It is the eighth largest Indian state by area, the ninth largest by population and comprises 29 districts. Kannada is the official and most widely spoken language.
The state has three principal geographical zones: the coastal region of Karavali, the hilly Malnad region comprising the Western Ghats and the Bayaluseeme region comprising the plains of the Deccan plateau. The highest point in Karnataka is the Mullayanagiri hills in Chikkamagaluru district which has an altitude of 1,929 metres (6,329 ft). Some of the important rivers in Karnataka are the Kaveri, the Tungabhadra, the Krishna and the Sharavathi.Karnataka experiences four seasons. The winter in January and February is followed by summer between March and May, the monsoon season between June and September and the post-monsoon season from October till December. Agumbe in the Shimoga district receives the second highest annual rainfall in India.The highest recorded temperature was 45.6 °C (114 °F) at Raichur and the lowest recorded temperature was 2.8 °C (37 °F) at Bidar.
ನಮ್ಮ ಜಿಲ್ಲೆಗಳು
೧ : ಬಾಗಲಕೋಟೆ
೨ : ಬ್ಯಾಂಗಲೋರ್ ರೂರಲ್
೩ : ಬ್ಯಾಂಗಲೋರ್ ಅರ್ಬನ್
೪ : ಬೆಳಗಾವಿ
೫ : ಬಳ್ಳಾರಿ
೬ : ಬೀದರ್
೭ : ಬಿಜಾಪುರ್
೮ : ಚಮರಜನಗರ್
೯ : ಚಿಕ್ಕಮಗಳೂರು
೧೦ : ಚಿತ್ರದುರ್ಗ
೧೧ : ದಕ್ಷಿಣ ಕನ್ನಡ
೧೨ : ದಾವಣಗೆರೆ
೧೩ : ಧಾರವಾಢ
೧೪ : ಗದಗ್
೧೫ : ಗುಲ್ಬರ್ಗ
೧೬ : ಹಾಸ್ಸನ್
೧೭ : ಹಾವೇರಿ
೧೮ : ಕೊಡಗು
೧೯ : ಕೋಲಾರ್
೨೦ : ಕೊಪ್ಪಲ್
೨೧ : ಮಂಡ್ಯ
೨೨ : ಮೈಸೂರ್
೨೩ : ರೈಚುರ್
೨೪ : ಶಿಮೊಗ
೨೫ : ತುಮಕೂರ್
೨೬ : ಉಡುಪಿ
೨೭ : ಉತ್ತರ ಕನ್ನಡ
೨೮ : ಚಿಕ್ಕಬಳ್ಳಾಪುರ
೨೯ : ರಾಮನಗರ
0 comments:
Post a Comment